Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕುಂದಾಪುರದಲ್ಲಿ ಅಂತರ್‌ ರಾಜ್ಯ ವಾಲಿಬಾಲ್‌ ಚಾಂಪಿಯನ್‌ಷಿಪ್‌

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಪ್ಪಿನಕುದ್ರುವಿನಲ್ಲಿ ಏಪ್ರಿಲ್‌ 6 ರಂದು ಹೊನಲು ಬೆಳಕಿನ ಅಂತರ್‌ ರಾಜ್ಯ ಮಟ್ಟದ ಆಹ್ವಾನಿತ ವಾಲಿಬಾಲ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. Shri Gopalakrishna Trophy Inter State Volleyball Championship on April 6 at Uppinakudru Kundapura.

ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಐತಿಹಾಸಿಕ ವಾಲಿಬಾಲ್‌‌ ಚಾಂಪಿಯನ್‌ಷಿಪ್‌ ದೇಶದ ಆರು ಪ್ರಮುಖ ತಂಡಗಳು ಪಾಲ್ಗೊಳ್ಳಲಿವೆ. ಉಪ್ಪಿನಕುದ್ರು ಗ್ರಾಮದ ಯಶಸ್ಸಿಗಾಗಿ ಶ್ರಮಿಸುತ್ತಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ರಾಜೇಶ್‌ ಕಾರಂತ್‌ Rajesh Karanth ಅವರ ಸಾರಥ್ಯದಲ್ಲಿ ಈ ಚಾಂಪಿಯನ್‌ಷಿಪ್‌ ನಡೆಯಲಿದೆ. ಉಡುಪಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಈ ರೀತಿಯಲ್ಲಿ ಬೃಹತ್‌ ಮಟ್ಟದ ವಾಲಿಬಾಲ್‌ ಚಾಂಪಿಯನ್‌ಷಿಪ್‌ ನಡೆಯುತ್ತಿದೆ. ಶ್ರೀ ಗೋಪಾಲಕೃಷ್ಣ ದೇವಸ್ಥಾನ ಉಪ್ಪಿನಕುದ್ರು, ಶ್ರೀ ಗೋಪಾಕೃಷ್ಣ ಯುವ ಸೇವಾ ಸಮಿತಿ ಉಪ್ಪಿನಕುದ್ರು ಹಾಗೂ ಉಪ್ಪಿನಕುದ್ರು ವಾಲಿಬಾಲ್‌ ಫ್ರೆಂಡ್ಸ್‌ ಇವರ ಸಂಯುಕ್ತ ಆಶ್ರಯದಲ್ಲಿ ಈ ಚಾಂಪಿಯನ್‌ಷಿಪ್‌ ನಡೆಯಲಿದೆ. ಶ್ರೀ ಗೋಪಾಲಕೃಷ್ಣ ಟ್ರೋಫಿ 2025 ಗಾಗಿ ನಡೆಯಲಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಪ್ರಥಮ ಸ್ಥಾನ ಗಳಿಸುವ ತಂಡ 100000 ರೂ. ನಗದು ಬಹುಮಾನ ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಗಳಿಸುವ 60,000 ರೂ. ನಗದು ಬಹುಮಾನ ಹಾಗೂ ಟ್ರೋಫಿ ಮತ್ತು ಸೆಮಿಫೈನಲ್‌ನಲ್ಲಿ ಪರಾಭವಗೊಂಡ ತಂಡಗಳಿಗೆ ತಲಾ 30,000 ರೂ., ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದ. ಅಲ್ಲದೇ ಆಕರ್ಷಕ ವೈಯಕ್ತಿಕ ಬಹುಮಾನಗಳೂ ಇರುತ್ತದೆ.

ಭಾಗವಹಿಸುವ ತಂಡಗಳು: CISF ರಾಂಚಿ, ಭಾರತೀಯ ರೈಲ್ವೆ, ಬೆಂಗಳೂರು ಸ್ಪೈಕರ್ಸ್‌, ಕೇರಳ ಸ್ಪೈಕರ್ಸ್‌, ಹೈದರಾಬಾದ್‌ ಸ್ಪೈಕರ್ಸ್‌, ಚೆನ್ನೈ ಚಾಂಪಿಯನ್ಸ್‌.

ಸ್ಥಳ: ಶ್ರೀ ಗೋಪಾಲಕೃಷ್ಣ ದೇವಸ್ಥಾನ ವಠಾರ ಉಪ್ಪಿನಕುದ್ರು. ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಪಂದ್ಯಗಳು ಸಂಜೆ 7 ಗಂಟೆಯಿಂದ ಆರಂಭಗೊಳ್ಳುತ್ತದೆ.

ಶ್ರೀ ಗೋಪಾಲಕೃಷ್ಣ ಯುವ ಸೇವಾ ಸಮಿತಿಯ ಬೆಳ್ಳಿ ಹಬ್ಬ: ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಉಪ್ಪಿನಕುದ್ರುವಿನ ಶ್ರೀಗೋಪಾಲಕೃಷ್ಣ ಸೇವಾ ಸಮಿತಿಗೆ 25 ವರ್ಷಗಳು ಪೂರ್ಣಗೊಂಡಿದೆ. ರಾಮನವಮಿಯ ಶುಭ ಅವಸರದಲ್ಲಿ ಐದು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು. ಅದರಲ್ಲಿ ಒಂದು ದಿನವನ್ನು ಕ್ರೀಡೆಗೆ ಮೀಸಲಿಡಲಾಗದೆ ಎಂದು ಸಮಿತಿಯ ಸದಸ್ಯರಾದ ಆನಂದ ಬಿಲ್ಲವ ತಲ್ಲೂರು ಅವರು ತಿಳಿಸಿದ್ದಾರೆ.

Please Subscribe Our Sports Channel for Inspirational Stories

ಉಪ್ಪಿನಕುದ್ರು ವಾಲಿಬಾಲ್‌ ಫ್ರೆಂಡ್ಸ್‌ ಬಹಳ ವರ್ಷಗಳಿಂದ ವಾಲಿಬಾಲ್‌ ಪಂದ್ಯಗಳನ್ನು ಆಯೋಜಿಸಿಕೊಂಡು ಬಂದಿದೆ. ಅಲ್ಲದೆ ಈ ಭಾಗದ ಉತ್ತಮ ತಂಡವಾಗಿಯೂ ಪ್ರಸಿದ್ಧಿ ಪಡೆದಿತ್ತು. ಕಳೆದ 35 ವರ್ಷಗಳಿಂದ ಉಪ್ಪಿನಕುದ್ರು ಫ್ರೆಂಡ್ಸ್‌ ಕಾರ್ಯನಿರ್ವಹಿಸುತ್ತ ಬಂದಿದೆ. ರಾಜೇಶ್‌ ಕಾರಂತರ ತಂದೆ ನರಸಿಂಹ ಕಾರಂತ್‌ ಅವರು ಹಲವಾರು ಟೂರ್ನಿಗಳನ್ನು ಆಯೋಜಿಸಿದ್ದರು. ಕಾರಂತರಿಗೆ ರಾಜ್ಯಮಟ್ಟದ ಟೂರ್ನಿಯನ್ನು ಆಯೋಜಿಸಬೇಕೆಂಬ ಹಂಬಲ. ಆ ಹಿನ್ನೆಲೆಯಲ್ಲಿ ಈ ಟೂರ್ನಿಯನ್ನು ಆಯೋಜಿಸಲಾಗಿದೆ ಎಂದು ಆನಂದ ಬಿಲ್ಲವ ಅವರು ತಿಳಿಸಿದ್ದಾರೆ.


administrator