Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ದೇವಧರ್ ಟ್ರೋಫಿ: ಅಜೇಯವಾಗಿ ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ ತಂಡ

ಧರ್ಮಶಾಲಾ: ದೇವಧರ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕರುಣ್ ನಾಯರ್ ನಾಯಕತ್ವದ ಕರ್ನಾಟಕ ತಂಡ ಅಜೇಯವಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಸೋಮವಾರ ಭಾರತ ’ಬಿ’ ತಂಡವನ್ನು 6 ರನ್‌ಗಳಿಂದ ರೋಚಕವಾಗಿ ಮಣಿಸಿದ್ದ ಕರ್ನಾಟಕ, ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ’ಎ’ ತಂಡವನ್ನು 65 ರನ್‌ಗಳಿಂದ ಬಗ್ಗು ಬಡಿಯಿತು. ಈ ಮೂಲಕ 8 ಅಂಕ ಸಂಪಾದಿಸಿ ಫೈನಲ್ ಪ್ರವೇಶಿಸಿತು. ಆಡಿದ ಎರಡೂ ಪಂದ್ಯಗಳನ್ನು ಸೋತ ಭಾರತ ’ಎ’ ತಂಡ ಟೂರ್ನಿಯಿಂದ ನಿರ್ಗಮಿಸಿತು.
PC: Twitter/Karun Nair
ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಟಾಸ್ ಸೋತು ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ, ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 339 ರನ್‌ಗಳ ಭಾರೀ ಮೊತ್ತ ಕಲೆ ಹಾಕಿತು.
ಕರ್ನಾಟಕ ಪರ ಮಧ್ಯಮ ಕ್ರಮಾಂಕದಲ್ಲಿ ಆರ್.ಸಮರ್ಥ್ 87 ಎಸೆತಗಳಲ್ಲಿ 86, ಪವನ್ ದೇಶಪಾಂಡೆ 87 ಎಸೆತಗಳಲ್ಲಿ 95, ಸ್ಟುವರ್ಟ್ ಬಿನ್ನಿ 24 ಎಸೆತಗಳಲ್ಲಿ ಅಜೇಯ 37 ಹಾಗೂ ಸಿ.ಎಂ ಗೌತಮ್ 26 ಎಸೆತಗಳಲ್ಲಿ ಅಜೇಯ 49 ರನ್ ಸಿಡಿಸಿ ಕರ್ನಾಟಕದ ಬೃಹತ್ ಮೊತ್ತಕ್ಕೆ ಕಾರಣರಾದರು.
ನಂತರ ಕಠಿಣ ಗುರಿ ಬೆನ್ನತ್ತಿದ ಭಾರತ ಎ ತಂಡ 39.5 ಓವರ್‌ಗಳಲ್ಲಿ 274 ರನ್‌ಗಳಿಗೆ ಆಲೌಟಾಯಿತು. ಭಾರತ ಎ ತಂಡ ಕರ್ನಾಟಕವನ್ನು ಹಿಂದಿಕ್ಕಿ ಫೈನಲ್ ಪ್ರವೇಶಿಸಬೇಕಾದರೆ 340 ರನ್‌ಗಳ ಗುರಿಯನ್ನು 40.4 ಓವರ್‌ಗಳಲ್ಲಿ ತಲುಪಬೇಕಿತ್ತು. ಗುರುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ, ಭಾರತ ಬಿ ತಂಡವನ್ನು ಎದುರಿಸಲಿದೆ. ಮುಂಬೈ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಭಾರತ ’ಬಿ’ ತಂಡದ ಸಾರಥ್ಯ ವಹಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 50 ಓವರ್‌ಗಳಲ್ಲಿ 4 ವಿಕೆಟ್‌ಗೆ 339 ರನ್
ಆರ್.ಸಮರ್ಥ್ 86, ಪವನ್ ದೇಶಪಾಂಡೆ 95, ಸ್ಟುವರ್ಟ್ ಬಿನ್ನಿ ಅಜೇಯ 37, ಸಿ.ಎಂ ಗೌತಮ್ ಅಜೇಯ 49; ಮೊಹಮ್ಮದ್ ಶಮಿ 2/96.
ಭಾರತ ಎ: 39.5 ಓವರ್‌ಗಳಲ್ಲಿ 274 ರನ್‌ಗಳಿಗೆ ಆಲೌಟ್
ಪೃಥ್ವಿ ಶಾ 40, ಉನ್ಮುಕ್ತ್ ಚಾಂದ್ 81, ಇಶಾನ್ ಕಿಶನ್ 73; ಕೆ.ಗೌತಮ್ 4/52, ರೋನಿತ್ ಮೋರೆ 3/64, ಶ್ರೇಯಸ್ ಗೋಪಾಲ್ 2/22, ಪ್ರಸಿದ್ಧ್ ಕೃಷ್ಣ 1/43.

administrator

Leave a Reply