Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಟೀಮ್ ಇಂಡಿಯಾ ಕ್ರಿಕೆಟಿಗರಿಗೆ ಬಂಪರ್: ಕೊಹ್ಲಿಗೆ 7 ಕೋಟಿ, ಧೋನಿಗೆ 5 ಕೋಟಿ, ರಾಹುಲ್‌ಗೆ 3 ಕೋಟಿ!

ಬೆಂಗಳೂರು: 2017-18ನೇ ಸಾಲಿನ ಬಿಸಿಸಿ ವಾರ್ಷಿಕ ಒಪ್ಪಂದ ಪ್ರಕಟವಾಗಿದ್ದು, ಟೀಮ್ ಇಂಡಿಯಾದ ಕ್ರಿಕೆಟ್ ತಾರೆಗಳಿಗೆ ಬಂಪರ್ ಹೊಡೆದಿದೆ. ಈ ಸಾಲಿನಿಂದ ‘ಎ+’ ಗ್ರೇಡ್ ಅನ್ನು ನೂತನವಾಗಿ ಪರಿಚಯಿಸಲಾಗಿದ್ದು, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ‘ಎ’ ಗ್ರೇಡ್‌ನಿಂದ ‘ಎ+’ ಗ್ರೇಡ್‌ಗೆ ಬಡ್ತಿ ಪಡೆದಿದ್ದಾರೆ. ಮಾಜಿ ನಾಯಕ ಎಂ.ಎಸ್ ಧೋನಿ ‘ಎ’ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ.
 2017ರ ಅಕ್ಟೋಬರ್‌ನಿಂದ 2018ರ ಸಪ್ಟೆಂಬರ್‌ವರೆಗಿನ ಒಪ್ಪಂದ ಇದಾಗಿದ್ದು, ಟೆಸ್ಟ್, ಏಕದಿನ ಹಾಗೂ ಟಿ20 ತಂಡಗಳಲ್ಲಿ ಆಟಗಾರರ ಪ್ರದರ್ಶನವನ್ನು ಆಟಗಾರರನ್ನು 4 ಗ್ರೇಡ್‌ಗಳನ್ನಾಗಿ ವಿಂಗಡಿಸಲಾಗಿದೆ.
PC: Twitter/BCCI
ಎಂ.ಎಸ್ ಧೋನಿ ಟೆಸ್ಟ್ ಕ್ರಿಕೆಟ್‌ಗೆ 2014ರಲ್ಲಿ ನಿವೃತ್ತಿ ಘೋಷಿಸಿದ್ದು, ಇದೀಗ ಏಕದಿನ ಹಾಗೂ ಟಿ20 ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ಹೀಗಾಗಿ ‘ಎ+’ ಗ್ರೇಡ್‌ನಲ್ಲಿ ಅವರಿಗೆ ಸ್ಥಾನ ಸಿಕ್ಕಿಲ್ಲ.
ಟೆಸ್ಟ್ ಕ್ರಿಕೆಟ್ ಮಾತ್ರ ಆಡುತ್ತಿರುವ ಆಲ್‌ರೌಂಡರ್‌ಗಳಾದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಚೇತೇಶ್ವರ್ ಪೂಜಾರ ‘ಎ’ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ನೂತನ ಒಪ್ಪಂದದ ಪ್ರಕಾರ ‘ಎ+’ ಗ್ರೇಡ್‌ನಲ್ಲಿರುವ ಆಟಗಾರರಿಗೆ ವಾರ್ಷಿಕ ತಲಾ 7 ಕೋಟಿ ರೂ. ‘ಎ’ ಗ್ರೇಡ್‌ನ ಆಟಗಾರರಿಗೆ ತಲಾ 5 ಕೋಟಿ, ‘ಬಿ’ ಗ್ರೇಡ್‌ನಲ್ಲಿರುವ ಆಟಗಾರರಿಗೆ  ತಲಾ 3 ಕೋಟಿ ಮತ್ತು ‘ಸಿ’ ಗ್ರೇಡ್‌ನಲ್ಲಿರುವ ಆಟಗಾರರಿಗೆ ತಲಾ 1 ಕೋಟಿ ರೂ. ಸಿಗಲಿದೆ.
ಕರ್ನಾಟಕದ  ಕೆ.ಎಲ್ ರಾಹುಲ್ ‘ಬಿ’ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ರಾಜ್ಯದ ಮತ್ತಿಬ್ಬರು ಆಟಗಾರರಾದ ಮನೀಶ್ ಪಾಂಡೆ ಮತ್ತು ಕರುಣ್ ನಾಯರ್ ‘ಸಿ’ ಗ್ರೇಡ್‌ನಲ್ಲಿದ್ದು ವಾರ್ಷಿಕ ಒಂದು ಕೋಟಿ ರೂ. ಪಡೆಯಲಿದ್ದಾರೆ.
ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಆಟಗಾರ ದಿನದ ಸಂಭಾವನೆಯಲ್ಲಿ ಶೇಕಡ 200ರಷ್ಟು ಹೆಚ್ಚಳ ಮಾಡಲಾಗಿದೆ.
‘ಎ+’ ಗ್ರೇಡ್(7 ಕೋಟಿ ರೂ.): ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ.
‘ಎ’ ಗ್ರೇಡ್(5 ಕೋಟಿ  ರೂ.): ಎಂ.ಎಸ್ ಧೋನಿ, ಆರ್.ಅಶ್ವಿನ್, ರವೀಂದ್ರ ಜಡೇಜಾ, ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ.
‘ಬಿ’ ಗ್ರೇಡ್(3 ಕೋಟಿ ರೂ.): ಕೆ.ಎಲ್ ರಾಹುಲ್, ಉಮೇಶ್ ಯಾದವ್, ಕುಲ್‌ದೀಪ್ ಯಾದವ್, ಯುಜ್ವೇಂದ್ರ ಚಹಾಲ್, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ, ದಿನೇಶ್ ಕಾರ್ತಿಕ್.
‘ಸಿ’ ಗ್ರೇಡ್(1 ಕೋಟಿ ರೂ.): ಮನೀಶ್ ಪಾಂಡೆ, ಕರುಣ್ ನಾಯರ್, ಕೇದಾರ್ ಜಾಧವ್, ಅಕ್ಷರ್ ಪಟೇಲ್, ಸುರೇಶ್ ರೈನಾ, ಪಾರ್ಥಿವ್ ಪಟೇಲ್, ಜಯಂತ್ ಯಾದವ್.
ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಆಟಗಾರರಿಗೆ ನೀಡಲಾಗುವ ದಿನದ ಸಂಭಾವನೆಯಲ್ಲಿ ಹೆಚ್ಚಳ
ಹಿರಿಯರ ಕ್ರಿಕೆಟ್: ಆಡುವ ಬಳಗದಲ್ಲಿರುವ ಆಟಗಾರರಿಗೆ 35,000 ರೂ.; ಮೀಸಲು ಆಟಗಾರರಿಗೆ 17,500 ರೂ.
23ರ ವಯೋಮಿತಿಯ ಕ್ರಿಕೆಟ್: ಆಡುವ ಬಳಗದಲ್ಲಿರುವ ಆಟಗಾರರಿಗೆ 17,500 ರೂ.; ಮೀಸಲು ಆಟಗಾರರಿಗೆ 8,750 ರೂ.
19ರ ವಯೋಮಿತಿಯ ಕ್ರಿಕೆಟ್: ಆಡುವ ಬಳಗದಲ್ಲಿರುವ ಆಟಗಾರರಿಗೆ 10,500 ರೂ.; ಮೀಸಲು ಆಟಗಾರರಿಗೆ 5,250 ರೂ.
16ರ ವಯೋಮಿತಿಯ ಕ್ರಿಕೆಟ್: ಆಡುವ ಬಳಗದಲ್ಲಿರುವ ಆಟಗಾರರಿಗೆ 3,500 ರೂ.; ಮೀಸಲು ಆಟಗಾರರಿಗೆ 1,750 ರೂ.

administrator

Leave a Reply