ಶ್ರೀಕಾಂತ್, ಸಿಂಧೂ ಪ್ರಿ ಕ್ವಾರ್ಟರ್ ಫೈನಲ್ ಗೆ – ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್

0
299
ಹೊಸದಿಲ್ಲಿ: 
ಭಾರತದ ಕಿಡಂಬಿ ಶ್ರೀಕಾಂತ್ ಹಾಗೂ ಪಿ ವಿ ಸಿಂಧೂ ನಾಂಜಿಂಗ್ ನಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಆದರೆ ಎಚ್ ಎಸ್ ಪ್ರಣೋಯ್ ಬ್ರೆಜಿಲ್ ನ ಯೋಗೋರ್ ಕೊಹಿಲೋ ವಿರುದ್ಧ ಅಚ್ಚರಿಯ ಸೋಲನುಭವಿಸಿದ್ದಾರೆ. 
ಒಲಿಮೋಲಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಸಿಂಧೂ ೨೧-೧೪, ೨೧-೧೯ ಅಂತರದಲ್ಲಿ ಇಂಡೋನೇಷ್ಯಾದ ಫಿಟ್ರಿಯಾನಿ ವಿರುದ್ಧ ಜಯ ಗಳಿಸಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದರು. ಕಳೆದಬಾರಿ ಬೆಳ್ಳಿ ಗೆದ್ದಿರುವ ಸಿಂಧೂ ಮುಂದಿನ ಸುತ್ತಿನಲ್ಲಿ ಕೊರಿಯಾದ ಸಂಗ್ ಜಿ ಹೂನ್ ವಿರುದ್ಧ ಸೆಣಸಲಿದ್ದಾರೆ.
೫ನೇ ಶ್ರೇಯಾಂಕ ಹೊಂದಿರುವ ಶ್ರೀಕಾಂತ್ ಕಠಿಣ ಹೋರಾಟದಲ್ಲಿ ಸ್ಪೇನ್ ನ ಪಾಬ್ಲೊ ಅಭಿಯಾನ್ ವಿರುದ್ಧ ೨೧-೧೫, ೧೨-೨೧, ೨೧-೧೪ ಅಂತರದಲ್ಲಿ ಗೆದ್ದು ಮುನ್ನಡೆದರು. ಕಳೆದ ವರ್ಷ ಚಾಂಪಿಯನ್ ಪಟ್ಟ ಗೆದ್ದಿರುವ ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ಮಳೆಯೇಷ್ಯಾದ ಡ್ಯಾರೆನ್ ಲಿವ್ ವಿರುದ್ಧ ಹೋರಾಟ ನಡೆಸಲಿದ್ದಾರೆ.
ಬಿ. ಸಾಯಿ ಪ್ರಣೀತ್ ಸ್ಪೇನ್ ನ ಲೂಯಿಸ್ ಎನ್ರಿಕ್ ಪೆನಾಲ್ವೆರ್ ವಿರುದ್ಧ ೨೧-೧೮, ೨೧-೧೧ ಅಂತರದಲ್ಲಿ ಜಯಗಳಿಸಿ ಮುನ್ನಡೆದರು.