Thursday, September 12, 2024

ಚೇತೇಶ್ವರ ಪೂಜಾರ ಬದಲಿಗೆ ರಾಹುಲ್ ಯಾಕೆ ?

ಎಡ್ಜ್ಬ್ಯಾಸ್ಟನ್ :ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಗೆ ಮಧ್ಯಮ ಕ್ರಮಾಂಕದ ಆಟಗಾರ ಚೇತೇಶ್ವರ ಪೂಜಾರ ಅವರ ಸ್ಥಾನದಲ್ಲಿ ಕೆ ಎಲ್ ರಾಹುಲ್ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಒಂದು ಉತ್ತಮ ತೀರ್ಮಾನ ಅಂದರೆ ತಪ್ಪಾಗಲಾರದು.

ಚೇತೇಶ್ವರ ಪೂಜಾರ ಇತ್ತೀಚಿನ  ದಿನಗಳಲ್ಲಿ ತೋರಿದ ಕಳಪೆ  ಪ್ರದರ್ಶನವೇ ಕರಣವಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ದದ ಸರಣಿ ಹಾಗೂ ಕೌಂಟಿಯಲ್ಲಿ ಪೂಜಾರ ಉತ್ತಮ ರೀತಿಯಲ್ಲ  ಆಡದಿರುವುದು ಅವರ ಸ್ಥಾನಕಿ ಕೈ ಜಾರಲು ಪ್ರಮುಖ ಕಾರಣವಾಗಿದೆ. ಒಂದು ವೇಳೆ ಪೂಜಾರ ಯಾರ್ಕ್ ಶೈರ್ ವಿರುದ್ಧ ಉತ್ತಮವಾಗಿ ಆಡಿರುತ್ತಿದ್ದರೆ ಈ ಬದಲಾವಣೆ ಆಗುತ್ತಿರಲಿಲ್ಲ. ಪೂಜಾರ ಟೆಸ್ಟ್ ಕ್ರಿಕೆಟ್ ನಲ್ಲಿ ಏಷ್ಯದ ಹೊರಗಡೆ ತೋರಿದ ಪ್ರದರ್ಶನ ತೃಪ್ತಿದಾಯಕವಾಗಿಲ್ಲ ೫೮ ಟೆಸ್ಟ್ ಪಂದ್ಯಗಳನ್ನಾಡಿರುವ ಪೂಜಾರ ೫೦.೩೪ ಸರಾಸರಿಯಲ್ಲಿ ೪೫೩೧ ರನ್ ಗಳಿಸಿರುತ್ತಾರೆ. ೨೦೧೪ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪೂಜಾರ ಅವರ ಸರಾಸರಿ ಕೇವಲ ೨೨.೨ ಸರಾಸರಿ. ೧೦ ಇನ್ನಿಗ್ಸ್ಗಳಲ್ಲಿ ಅವರು ಗಳಿಸಿದ್ದು ಕೇವಲ ೨೨೨ ರನ್. ಇದು ನಿರಾಶಾದಾಯಕ ಪ್ರದರ್ಶನ. ಇಂಗ್ಲೆಂಡ್ ನಲ್ಲೂ ಅತ್ಯಂತ ಕಳಪೆ ಪ್ರದರ್ಶನ ತೋರಿದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಮನೆಯಂಗಣದಲ್ಲಿ ಜೇಮ್ಸ್ ಆಂಡರ್ಸನ್ ಹಾಗು ಸ್ಟುವರ್ಟ್ ಬ್ರಾಡ್ ಭಾರತದ ವಿರುದ್ಧ ೧೦೦ ವಿಕೆಟ್ಸ್ ಗಳನ್ನು  ಹಂಚಿಕೊಡಿದ್ದಾರೆ. 
ಕೆ ಎಲ್ ರಾಹುಲ್ ಪ್ರತಿಯೊಂದು ಮಾದರಿಯಲ್ಲೂ ಉತ್ತಮ ಪ್ರದರ್ಶನ ತೋರುತ್ತಿರುವುದು ಕೊಹ್ಲಿಯ ಮನ ಗೆಲ್ಲಲು ಕಾರಣವಾಗಿದೆ.

Related Articles