ಎಟಿಕೆಗೆ ಜಯ, ಪ್ಲೇ ಆಫ್ ಆಸೆ ಜೀವಂತ

0
276
ಕೋಲ್ಕೊತಾ
ಮ್ಯಾನ್ವೆಲ್ ಲಾನ್ಜೆರೋಟ್  (3 ಮತ್ತು  33ನೇ ನಿಮಿಷ ) ಫ್ರೀ ಕಿಕ್ ಮೂಲಕ ಗಳಿಸಿದ ಎರಡು ಗೋಲುಗಳ ನೆರವಿನಿಂದ ಜೆಮ್ಷೆಡ್ಪುರ ತಂಡವನ್ನು  2-1 ಗೋಲಿನಿಂದ ಮಣಿಸಿದ ಎಟಿಕೆ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ಲೇ ಆಫ್ ತಲಪುವ ಆಸೆಯನ್ನು ಜೀವಂತವಾಗಿಸಿಕೊಂಡಿದೆ. ಜೆಮ್ಷೆಡ್ಪುರ ತಂಡದ ಪರ ಮಾರಿಯೋ ಅರ್ಕ್ವೆಸ್ 82ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. 
ಕೋಲ್ಕೊತಾ ಮೇಲುಗೈ
33ನೇ ನಿಮಿಷದಲ್ಲಿ ಲಾನ್ಜೆರೋಟ್‌ಗೆ ಎರಡನೇ ಯಶಸ್ಸು.  ಈ ಬಾರಿಯೂ ಫ್ರೀ ಕಿಕ್ ಮೂಲಕ ಲಾನ್ಜೆರೋಟ್ ಎರಡನೇ ಗೋಲು ಗಳಿಸಿದರು. ಈ ಹಿಂದಿನ ಫ್ರೀ ಕಿಕ್‌ಗಿಂತಲೂ ಎರಡನೇಯದು ಬಹಳ ಅದ್ಭುತವಾಗಿತ್ತು.  ಈ  ಬಾರಿ ಚೆಂಡು ಪೆನಾಲ್ಟಿ  ಬಾಕ್ಸ್‌ನಿಂದ ಬಹಳ ದೂರವಿತ್ತು. ಅಷ್ಟು ಸುಲಭವಾಗಿ ಗೋಲಾಗದು ಎಂದು ಟಾಟಾ ಪಡೆಯ ಲೆಕ್ಕಾಚಾರವಾಗಿತ್ತು. ಲಾನ್ಜರೋಟ್ ಯಾವುದೇ ಪ್ರಮಾದವೆಸಗದೆ ಚೆಂಡನ್ನು ಗೋಲ್ ಬಾಕ್ಸ್‌ಗೆ ಗುರಿ ಇಟ್ಟರು. ಈ ಬಾರಿಯೂ ಸುಬ್ರತಾ ಪಾಲ್ ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಪ್ರಥಮಾ‘ರ್ದಲ್ಲಿ  ಎಟಿಕ್ಕೆ ತಂಡಕ್ಕೆ 2-0 ಮುನ್ನಡೆ.
ಮ್ಯಾನ್ವೆಲ್ ಲಾನ್ಜೆರೋಟ್ ಆಗಮನ ಎಟಿಕೆ ತಂಡದ ಆತ್ಮಬಲವನ್ನೇ ಹೆಚ್ಚಿಸಿತು. ಪಂದ್ಯ ಆರಂಭಗೊಂಡ 3ನೇ ನಿಮಿಷದಲ್ಲೇ ಎಟಿಕೆ ಗೋಲಿನ ದಾಖಲೆ ತೆರೆಯಿತು. ಪೆನಾಲ್ಟಿ ವಲಯದ ಹೊರ ಭಾಗದಲ್ಲಿ ಜೆಮ್ಷೆಡ್ಪುರ ಆಟಗಾರ ಮಾಡಿದ ಪ್ರಮಾದ ಫ್ರೀ ಕಿಕ್ ಅವಕಾಶ ತಂದುಕೊಟ್ಟಿತು. ಬಹಳ ಸಮಯ ತಂಡದಿಂದ ಹೊರಗುಳಿದಿದ್ದ  ಲಾನ್ಜೆರೋಟ್ ಗೋಲ್‌ಬಾಕ್ಸ್‌ಗೆ ಗುರಿ ಇಡುವ ಜವಾಬ್ದಾರಿ ವಹಿಸಿಕೊಂಡರು. ಎಡು ಗಾರ್ಸಿಯಾ ನೀಡಿದ ಪಾಸ್ ಮೂಲಕ ಗೋಲ್ ಬಾಕ್ಸ್ ಕಡೆಗೆ ಸಾಗುತ್ತಿತ್ತು. ಆದರೆ ಟಾಟಾ ಪಡೆಯ ಪ್ರಮಾದ ಎಟಿಕೆಗೆ ಅವಕಾಶ ಮಾಡಿಕೊಟ್ಟಿತು. ಸ್ಪೇನ್ ಮೂಲದ ಆಟಗಾರ ಲಾನ್ಜೆರೋಟ್ ತುಳಿದ ಚೆಂಡು ನೇರವಾಗಿ ಗೋಲ್ ಬಾಕ್ಸ್ ಸೇರಿತ್ತು. ಸುಬ್ರತಾ ಪಾಲ್ ಅವರ ಪ್ರಯತ್ನ ಯಾವುದೇ ರೀತಿಯ ಫಲ ನೀಡಲಿಲ್ಲ. 
ಇಂಡಿಯನ್ ಸೂಪರ್ ಲೀಗ್‌ನ 68ನೇ ಪಂದ್ಯ ನಿಜವಾಗಿಯೂ ಕುತೂಹಲದ ಕ್ಷಣಗಳಿಗ ಸಾಕ್ಷಿಯಾಗಲಿದೆ. ಏಕೆಂದರೆ ಇಲ್ಲಿ ಗೆಲ್ಲುವ ತಂಡ ಮಾತ್ರ ಪ್ಲೇ ಆಫ್  ಹಾದಿಯತ್ತ ಸಾಗಲಿದೆ. ಅಂಕಪಟ್ಟಿಯಲ್ಲಿ ಜೆಮ್ಷೆಡ್ಪುರ ತಂಡ ಎಟಿಕೆಗಿಂತ ಮೇಲಿರುವುದು ಸ್ಪಷ್ಟ. ಆದರೆ ಇಲ್ಲಿ ಟಾಟಾ ಪಡೆ ಸೋತರೆ ಎಟಿಕೆ ಮೇಲುಗೈ ಸಾಧಿಸುವುದು ಖಚಿತ. ಆದರೆ ಅಂಕ ಪಟ್ಟಿಯಲ್ಲಿ ಸಮಬಲವಾಗಲಿದೆ. ಮೂರು ಅಂಕ ಈ ಎರಡು ತಂಡಗಳನ್ನು ಪ್ರತ್ಯೇಕಿಸಲಿದೆ. ಇಲ್ಲಿ ಹೋರಾಟ ಇರುವುದು ನಾಲ್ಕನೇ ಸ್ಥಾನಕ್ಕಾಗಿ ಎನ್ನುವುದು ಸ್ಪಷ್ಟ. ಹಿಂದಿನ ಪಂದ್ಯದಲ್ಲಿ ಇತ್ತಂಡಗಳು ಡ್ರಾಗೆ ತೃಪ್ತಿಪಟ್ಟಿದ್ದವು. ಇತ್ತಂಡಗಳು ಇದುವರೆಗೂ ಮುಖಾಮುಖಿಯಾಗಿದ್ದು, ಜೆಮ್ಷೆಡ್ಪುರ ಒಂದು ಪಂದ್ಯ ಗೆದ್ದು ಮೇಲುಗೈ ಸಾಧಿಸಿತು. ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡವು.  ಬೆಂಗಳೂರು ಎಫ್ಸಿ ನಂತರರ ಡಿಫೆನ್ಸ್ ವಿಭಾಗದಲ್ಲಿ ಪ್ರಭುತ್ವ ಸಾಧಿಸಿದ ತಂಡ ಅದು ಎಟಿಕೆ. ಅಮಾನತುಗೊಂಡಿರುವ ಮ್ಯಾನ್ವೆಲ್ ಲಾನ್ಜೆರೋಟ್ ಅಂಗಣದಲ್ಲಿ ಕಾಣಿಸಿಕೊಂಡಿದ್ದು, ಎಟಿಕೆಗೆ ಜೀವ ತುಂಬಿದಂತಾಗಿದೆ.  ಟಿಮ್ ಕಹಿಲ್ ಹಾಗೂ ಕಾರ್ಲೋಸ್ ಕಾಲ್ವೋ ಅವರ ಅನುಪಸ್ಥಿತಿ ಜೆಮ್ಷೆಡ್ಪುರ ತಂಡವನ್ನು ಕಾಡುವುದು ಸಹಜ.