Tuesday, December 7, 2021

ಈ ಓಟಗಾರನಿಗೆ ಈಗ ಗಾರೆ ಕೆಲಸವೇ ಗತಿ!

ಸ್ಪೋರ್ಟ್ಸ್ ಮೇಲ್ ವರದಿ: ಆತ ಶಾಲಾ ದಿನಗಳಲ್ಲಿ ಓಟದಲ್ಲಿ ಚಾಂಪಿಯನ್, ನಂತರ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗೆದ್ದು ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದವರು. ಕಂಬಳದಲ್ಲಿ ಕೋಣದ ಜೊತೆ ಓಡಿ ಎಲ್ಲರ ಪ್ರೀತಿಗೆ ಪಾತ್ರರಾದರು. ಆದರೆ ಯಾವುದೇ ಪ್ರೋತ್ಸಾಹ ಸಿಗಲಿಲ್ಲ. ಏಕೆಂದರೆ ಆತ ಗ್ರಾಮೀಣ ಪ್ರತಿಭೆ. ಈಗ ಮೀನು ಹಿಡಿಯುವುದು ಮತ್ತು ಗಾರೆ ಕೆಲಸ ಮಾಡಿಕೊಂಡಿರುವುದು ಅನಿವಾರ್ಯವಾಗಿದೆ. ನಾವು...

ಸಾವನ್ನೇ ಗೆದ್ದ ವಿಶ್ವಗೆ ಚಿನ್ನ ಗೆಲ್ಲೋದು ಕಷ್ಟವೇ ?

ಸೋಮಶೇಖರ್ ಪಡುಕರೆ: ಆ ಚಾಂಪಿಯನ್ ಪವರ್‌ಲಿಫ್ಟರ್ ಬೆಂಗಳೂರಿನಿಂದ ಖಾಸಗಿ ಬಸ್ಸಿನಲ್ಲಿ ಕುಂದಾಪುರಕ್ಕೆ ಪ್ರಯಾಣಿಸುತ್ತಿದ್ದರು. ಮಂಗಳೂರಿನ ಹೊರವಲಯ ಬೈಕಂಪಾಡಿಯಲ್ಲಿ ಬಸ್ಸು ಚಲಿಸುತ್ತಿರುವಾಗ ಕ್ರೇನ್‌ನ ಮುಂಭಾಗ ಬಸ್ಸಿಗೆ ಬಡಿದ ಪರಿಣಾಮ ಬಸ್ಸಿನಲ್ಲಿದ್ದ ಆ ಯುವಕನಿಗೆ ಗಂಭೀರ ಗಾಯವಾಯಿತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ದೂರವಾಣಿ ಮೂಲಕ ಕ್ಷೇಮ ವಿಚಾರಿಸಿದಾಗ ಅವರ ಗೆಳೆಯರಿಂದ ಡಾಕ್ಟರು ಜೀವಕ್ಕೆ ಅಪಾಯವಿದೆ...

ಥಾಯ್ಲೆಂಡ್ ನಲ್ಲಿ ಸದ್ದು ಮಾಡಿದ ಕಟ್ಕೆರೆಯ ಅನೀಶ್ ಶೆಟ್ಟಿಯ ಕಿಕ್!

ಥಾಯ್ಲೆಂಡ್ ನಲ್ಲಿ ಸದ್ದು ಮಾಡಿದ ಕಟ್ಕೆರೆಯ ಅನೀಶ್ ಶೆಟ್ಟಿಯ ಕಿಕ್! ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಕಳೆದ ಅರು ವರ್ಷಗಳಿಂದ ವೃತ್ತಿಪರ ಮೊಯ್ ಥಾಯ್ ಕಿಕ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ತೊಡಗಿಕೊಂಡಿದ್ದ ವೃತ್ತಿಪರ ಕಿಕ್ ಬಾಕ್ಸರ್ ನನ್ನು ಕೆಲವು ಸೆಕೆಂಡುಗಳಲ್ಲೇ ನೆಲಕ್ಕುರುಳಿಸಬೇಕೆಂದರೆ ಆತನಲ್ಲಿ ಎಂಥಾ ಅದ್ಭುತ ತಾಕತ್ತಿರಬೇಕು?....ಎಂಥಾ ಬದ್ಧತೆ ಇರಬೇಕು?....ಎಷ್ಟು ವರ್ಷ ಪಳಗಿರಬೇಕು? …..ಅವರ ಕೋಚ್ ಇನ್ನೆಷ್ಟು...

ಒಂದೇ ಓವರ್ 41 ರನ್ ! ಇದು ನ್ಯಾಶ್ ನ ಬ್ರಹ್ಮಾಸ್ತ್ರ ದಾಖಲೆ

ಆರ್.ಕೆ . ಆಚಾರ್ಯ ಕೋಟ  ದುಬೈನಲ್ಲಿ ಏಷ್ಯಾ ಕಪ್ ನೀರಸವಾಗಿ ನಡೆಯುತ್ತಿದ್ದರೆ ಕರ್ನಾಟಕದ ಗ್ರಾಮೀಣ ಹಾಗೂ ಜಿಲ್ಲಾ ಮಟ್ಟದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಗಳು ಅತ್ಯಂತ ಕುತೂಹಲದಿಂದ ನಡೆಯುತ್ತಿವೆ. ಕಳೆದ ರವಿವಾರ ನಡೆದ ಅರಸೀಕೆರೆ ಪ್ರೀಮಿಯರ್ ಲೀಗ್ ನಲ್ಲಿ ಒಂದೇ ಓವರ್ನಲ್ಲಿ 41 ರನ್ ದಾಖಲಾಗಿ ವಿಶ್ವ ದಾಖಲೆಯೊಂದು ನಿರ್ಮಾಣಗೊಂಡಿತು. ಇದು ಟೆನಿಸ್ ಬಾಲ್ ಕ್ರಿಕೆಟ್ ನ...

ಅಥ್ಲೆಟಿಕ್ಸ್ ನಲ್ಲಿ ಸದ್ದಿಲ್ಲದೆ ಕ್ರಾಂತಿ ಮಾಡಿದ ಉಡುಪಿಯ ಜಾಹೀರ್ ಅಬ್ಬಾಸ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್   ಕಳೆದ ಹತ್ತು ವರ್ಷಗಳಿಂದ ರಾಜ್ಯ ಮತ್ತು ರಾಷ್ಟ್ರೀಯ ಅಥ್ಲೆಟಿಕ್ಸ್ ನಲ್ಲಿ ಉಡುಪಿ ಜಿಲ್ಲೆ ತನ್ನದೇ ಆದ ದಾಖಲೆಯನ್ನು ನಿರ್ಮಿಸುತ್ತಿದೆ. ಟ್ರ್ಯಾಕ್ ಮತ್ತು ಫೀಲ್ಡ್ ನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪದಕಗಳು ಉಡುಪಿಯ ಮಡಿಲು ಸೇರುತ್ತಿದೆ, ಒಬ್ಬ ಅಥ್ಲೀಟ್ ಇತ್ತೀಚೆಗೆ ಮುಕ್ತಾಯಗೊಂಡ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದರೆ, ನಾಲ್ವರು...

ಸ್ಪೋರ್ಟ್ಸ್ ಮೇಲ್‌ಗೆ ಚಾಲನೆ ನೀಡಿದ ಸುನಿಲ್, ಶ್ರೀಜೇಶ್, ಸರ್ದಾರ್

ಸ್ಪೋರ್ಟ್ಸ್ ಮೇಲ್ ವರದಿ: ಅಂತಾರಾಷ್ಟ್ರೀಯ ಹಾಕಿ ಆಟಗಾರ, ಹಾಕಿ ಜಗತ್ತಿನ ಬೋಲ್ಟ್ ಎಂದೇ ಖ್ಯಾತಿ ಪಡೆದಿರುವ ಕನ್ನಡಿಗ ಎಸ್.ವಿ. ಸುನಿಲ್, ಭಾರತ ಹಾಕಿ ತಂಡದ ನಾಯಕ, ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಹಾಗೂ 300 ಅಂತಾರಾಷ್ಟ್ರೀಯ ಪಂದ್ಯಗಳನ್ನು ಪೂರ್ಣಗೊಳಿಸಿದ  ಭಾರತ ಹಾಕಿ ತಂಡದ ಅನುಭವಿ ಆಟಗಾರ ಸರ್ದಾರ್ ಸಿಂಗ್ ಕನ್ನಡದ ಮೊದಲ ಕ್ರೀಡಾ ವೆಬ್‌ಸೈಟ್ ಸ್ಪೋರ್ಟ್ಸ್ ಮೇಲ್‌ಗೆ...

ಹೋಗಿ ಬನ್ನಿ ಶೆಟ್ರೇ…ಸಾಹಸಿಗೆ ಸಾವಿಲ್ಲ

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್  ಕಳೆದ 20ಕ್ಕೂ ಹೆಚ್ಚು ವರ್ಷ ಸಾಹಸ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಉಡುಪಿ ಜಿಲ್ಲೆಯ ಬ್ರಹ್ಮಾವರದ ನಡೂರು  ಮೂಲದ ಸಾಫ್ಟ್ ವೇರ್ ಎಂಜಿನಿಯರ್ ನವೀನ್ ಶೆಟ್ಟಿ, ಭಾನುವಾರ ಕೇರಳದ ಕೊಜಿಕ್ಕೋಡ್ ನಲ್ಲಿ ಕಯಾಕಿಂಗ್  ಅಭ್ಯಾಸ ಮಾಡುವಾಗ ಕಂಡು ಬಂದ ಅನಿರೀಕ್ಷಿತ ಪ್ರವಾಹದಲ್ಲಿ ದುರಂತ ಸಾವನ್ನಪ್ಪಿದ್ದಾರೆ. ದುರಂತದಲ್ಲಿರುವವರನ್ನೇ ರಕ್ಷಿಸಿದ ನವೀನ್ ಇಂದು ದುರಂತ ಸಾವನ್ನು...

ತೂಕ ಇಳಿಸಲು ಹೋಗಿ ವಿಶ್ವ ಚಾಂಪಿಯನ್‌ ಆದ ವೈಭವ್‌ ಶೆಟ್ಟಿ!!

ಸೋಮಶೇಖರ್‌ ಪಡುಕರೆ, Sportsmail ದೇಹದ ತೂಕ ಇಳಿಸಲು ಜಿಮ್‌ಗೆ ಹೋಗಿ, ಅಲ್ಲಿ ವಿವಿಧ ಮಾರ್ಷಲ್‌ ಆರ್ಟ್ಸ್‌ಗಳಲ್ಲಿ ಪರಿಣತನಾಗಿ, ಜಾಗತಿಕ ಮಟ್ಟದಲ್ಲಿ ಪದಕಗಳ ಕೊಳ್ಳೆ ಹೊಡೆದು ಈಗ ಅಮೆರಿಕದಲ್ಲಿ ಸದ್ದಿಲ್ಲದೆ ಖ್ಯಾತಿ ಪಡೆಯುತ್ತಿರುವ ಅಂತಾರಾಷ್ಟ್ರೀಯ ಮಿಕ್ಸೆಡ್‌ ಮಾರ್ಷಲ್‌ ಆರ್ಟ್ಸ್‌ ಪಟು ವೈಭವ್‌ ಶೆಟ್ಟಿಯ ಬದುಕಿನ ಹಾದಿ ಇತರರಿಗೆ ಸ್ಫೂರ್ತಿ ಇದ್ದಂತೆ.     ಮುಂಬೈ ಸಂಜಾತ ವೈಭವ್‌ ಶೆಟ್ಟಿ ಮೂಲ್ಕಿಯ ಉಲ್ಲೂರುಗುತ್ತು...

12 ಬಾರಿ ಬೆಸ್ಟ್ ಲಿಫ್ಟರ್ ಗೌರವ ಆದರೆ ಈ ಚಾಂಪಿಯನ್ ನಿರುದ್ಯೋಗಿ !

ಸೋಮಶೇಖರ್ ಪಡುಕರೆ ಬೆಂಗಳೂರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ 12 ಬಾರಿ ಬೆಸ್ಟ್ ಲಿಫ್ಟರ್.  ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಲ್ಕು ಬಾರಿ ಚಿನ್ನದ ಪದಕ, ದುಬೈಯಲ್ಲಿ ಏಷ್ಯನ್ ಬೆಂಚ್‌ಪ್ರೆಸ್‌ನಲ್ಲಿ ಎರಡು ಸ್ವರ್ಣ. ಹೀಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದ  ಮಂಗಳೂರಿನ ಚಾಂಪಿಯನ್ ಲಿಫ್ಟರ್ ಅಕ್ಷತಾ ಪೂಜಾರಿಗೆ ನಾವು ಒಂದು ಉದ್ಯೋಗವನ್ನು ನೀಡುವಲ್ಲಿ ವಿಫಲರಾಗಿದ್ದೇವೆ. ನಮ್ಮ...

ಅವರ ಬದುಕಿಗಾಗಿ ಇವರ ಓಟ!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಈ ಬದುಕೇ ಒಂದು ಓಟ ಇದ್ದಂತೆ.  ನಮ್ಮ ನಮ್ಮ ಬದುಕನ್ನು ರೂಪಿಸಿಕೊಳ್ಳುವುದರಲ್ಲೇ ನಮ್ಮ ಬದುಕಿನ ಓಟ ಸಾಗುತ್ತಿರುತ್ತದೆ…ಪೂರ್ಣಗೊಳ್ಳುತ್ತದೆ. ಕೆಲವೊಮ್ಮೆ ಗುರಿ ತಲುಪದೆ ವಿರಮಿಸುತ್ತೇವೆ. ಈ ನಡುವೆ ಬೇರೆಯವರ ಬದುಕಿಗಾಗಿ ಓಡಬೇಕೆಂದರೆ? ಅದು ಕಷ್ಟ ಸಾಧ್ಯ. ತಮ್ಮ ಬದುಕಿನ ನಡುವೆ ನಿತ್ಯವೂ ಬೇರೆಯವರ ಬದುಕಿಗಾಗಿ ಓಡುವವರಿದ್ದಾರೆಂದರೆ ಈ ನಾಡು ಅದೆಷ್ಟು ಪುಣ್ಯ...

MOST COMMENTED

ಚಿನ್ನ ಗೆದ್ದ ದಿಯಾ ರವಿ

ಸ್ಪೋರ್ಟ್ಸ್ ಮೇಲ್ ವರದಿ  ಬೆಂಗಳೂರಿನ ಬನಶಂಕರಿಯಲ್ಲಿರುವ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯ ಎರಡನೆಯ ತರಗತಿ ವಿದ್ಯಾರ್ಥಿನಿ ದಿಯಾ ಆರ್. ಶಾಲಾ ವಾರ್ಷಿಕ ಕ್ರೀಡಾ ಕೂಟದ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 300 ಮೀ. ಓಟದಲ್ಲಿ...

HOT NEWS