ಮಹಿಳಾ ಏಕದಿನ ಕ್ರಿಕೆಟ್: ಎಲೈಸ್ ಪೆರಿ ಆಲ್ರೌಂಡ್ ಆಟ, ಭಾರತ ವಿರುದ್ಧ ಸರಣಿ ಗೆದ್ದ ಆಸೀಸ್ ವನಿತೆಯರು
ವಡೋದರ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಸೋಲು ಕಂಡಿರುವ ಭಾರತ ಮಹಿಳಾ ತಂಡ, 3 ಪಂದ್ಯಗಳ ಸರಣಿಯನ್ನು ಕಾಂಗರೂಗಳಿಗೆ ಒಪ್ಪಿಸಿದೆ.
ವಡೋದರದ ರಿಲಾಯನ್ಸ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯ ಭಾರತದ ಪಾಲಿಗೆ ನಿರ್ಣಾಯಕವಾಗಿತ್ತು. ಮೊದಲ ಪಂದ್ಯವನ್ನು ಸೋತಿದ್ದ ಭಾರತ ತಂಡ, ಸರಣಿಯನ್ನು ಜೀವಂತವಾಗಿಡಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತುಘಿ. ಅನಾರೋಗ್ಯದ ಕಾರಣ ಕಳೆದ ಪಂದ್ಯದಿಂದ ಹೊರಗುಳಿದಿದ್ದ...
ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡ ಆಸೀಸ್ ವನಿತೆಯರು, ಭಾರತಕ್ಕೆ ಮುಳುವಾದ ಮಿಥಾಲಿ ಅಲಭ್ಯತೆ
ವಡೋದರ: ನಾಯಕಿ ಮಿಥಾಲಿ ರಾಜ್ ಅವರ ಅನುಪಸ್ಥಿತಿಯಲ್ಲಿ ಆಡಿದ ಭಾರತದ ಮಹಿಳಾ ತಂಡ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್ಗಳ ಹೀನಾಯ ಸೋಲು ಅನುಭವಿಸಿದೆ.
ಈ ಮೂಲಕ 2017ರ ಐಸಿಸಿ ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ ವಿರುದ್ಧ ಅನುಭವಿಸಿದ್ದ ಸೋಲಿಗೆ ಆಸ್ಟ್ರೇಲಿಯಾ ತಂಡ ಸೇಡು ತೀರಿಸಿಕೊಂಡು 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ರಿಲಾಯನ್ಸ್...
ದೇವಧರ್ ಟ್ರೋಫಿ: ಅಜೇಯವಾಗಿ ಫೈನಲ್ಗೆ ಲಗ್ಗೆಯಿಟ್ಟ ಕರ್ನಾಟಕ ತಂಡ
ಧರ್ಮಶಾಲಾ: ದೇವಧರ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕರುಣ್ ನಾಯರ್ ನಾಯಕತ್ವದ ಕರ್ನಾಟಕ ತಂಡ ಅಜೇಯವಾಗಿ ಫೈನಲ್ಗೆ ಲಗ್ಗೆಯಿಟ್ಟಿದೆ.
ಸೋಮವಾರ ಭಾರತ ’ಬಿ’ ತಂಡವನ್ನು 6 ರನ್ಗಳಿಂದ ರೋಚಕವಾಗಿ ಮಣಿಸಿದ್ದ ಕರ್ನಾಟಕ, ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ’ಎ’ ತಂಡವನ್ನು 65 ರನ್ಗಳಿಂದ ಬಗ್ಗು ಬಡಿಯಿತು. ಈ ಮೂಲಕ 8 ಅಂಕ ಸಂಪಾದಿಸಿ ಫೈನಲ್ ಪ್ರವೇಶಿಸಿತು. ಆಡಿದ...
ಹರಿಣಗಳ ನಾಡಲ್ಲಿ ದಾಖಲೆ ಬರೆದ ಟೀಮ್ ಇಂಡಿಯಾದ ರಿಸ್ಟ್ ಸ್ಪಿನ್ನರ್ಗಳು
ಪೋರ್ಟ್ ಎಲಿಜಬೆತ್: ಟೀಮ್ ಇಂಡಿಯಾದಲ್ಲೀಗ ಯುವ ರಿಸ್ಟ್ ಸ್ಪಿನ್ನರ್ಗಳಾದ ಉತ್ತರ ಪ್ರದೇಶದ ಕುಲ್ದೀಪ್ ಯಾದವ್ ಮತ್ತು ಹರ್ಯಾಣದ ಯುಜ್ವೇಂದ್ರ ಚೇಹಲ್ ಅವರದ್ದೇ ದರ್ಬಾರ್.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಹರಿಣಗಳ ವಿರುದ್ಧದ 6 ಪಂದ್ಯಗಳ ಏಕದಿನ ಸರಣಿಯ ಮೊದಲ ಐದು ಪಂದ್ಯಗಳಲ್ಲಿ ಕುಲ್ದೀಪ್ ಯಾದವ್ ಮತ್ತು ಯುಜ್ವೇಂದ್ರ ಚೇಹಲ್ ಒಟ್ಟು 30 ವಿಕೆಟ್ ಪಡೆದು ಮಿಂಚಿದ್ದಾರೆ. ಇದರಲ್ಲಿ...
ವಿಜಯ್ ಹಜಾರೆ: ಕನ್ನಡಿಗರ ಖದರ್ಗೆ ಒಡಿಶಾ ಉಡೀಸ್
ಬೆಂಗಳೂರು: ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅಬ್ಬರಿಸಿದ ಕರ್ನಾಟಕ ತಂಡ, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಒಡಿಶಾ ತಂಡವನ್ನು 133 ರನ್ಗಳಿಂದ ಭರ್ಜರಿಯಾಗಿ ಬಗ್ಗು ಬಡಿದಿದೆ.
ಈ ಮೂಲಕ ’ಎ’ ಗುಂಪಿನಲ್ಲಿ 5 ಪಂದ್ಯಗಳಿಂದ 14 ಅಂಕಗಳನ್ನು ಸಂಪಾದಿಸುವ ಮೂಲಕ ನಾಕೌಟ್ ಸ್ಥಾನವನ್ನು ಬಹುತೇಕ ಖಚಿತ ಪಡಿಸಿಕೊಂಡಿದೆ.
ಇಲ್ಲಿನ ಹೊರವಲಯದಲ್ಲಿರುವ ಆಲೂರಿನ ಕೆಎಸ್ಸಿಎ ಕ್ರಿಕೆಟ್ ಮೈದಾನ(1)ರಲ್ಲಿ ಮಂಗಳವಾರ...
ಮಾಸ್ಟರ್ ಬ್ಲಾಸ್ಟರ್ ಸಚಿನ್ ದಾಖಲೆ ಮುರಿದ ರೋಹಿತ್ ಶರ್ಮಾ
ಪೋರ್ಟ್ ಎಲಿಜಬೆತ್: ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತದ ಆಟಗಾರರ ಪೈಕಿ 2ನೇ ಸ್ಥಾನಕ್ಕೇರಿದ್ದಾರೆ.
ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮಾಡಿದರು. ಒಟ್ಟು 265 ಸಿಕ್ಸರ್ಗಳನ್ನು ಸಿಡಿಸಿರುವ ರೋಹಿತ್ ಶರ್ಮಾ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್...