Saturday, January 15, 2022
Home Authors Posts by SportsMail

SportsMail

1110 POSTS 0 COMMENTS

MOST COMMENTED

ಲಾರಿಯಸ್ ಪ್ರಶಸ್ತಿ ಪಡೆದು ಇತಿಹಾಸ ನಿರ್ಮಿಸಿದ ಸಚಿನ್, ಮೆಸ್ಸಿ

ಪ್ರದೀಪ್ ಕುಮಾರ್, ಪಡುಕರೆ ಕ್ರೀಡಾ ಲೋಕದ ಅತ್ಯುನ್ನತ  ಪ್ರಶಸ್ತಿಯಾದ ಕ್ರೀಡಾ ಆಸ್ಕರ್ ಎಂದೇ  ಕರೆಯಲ್ಪಡುವ ಪ್ರತಿಷ್ಠಿತ 'ಲಾರಿಯಸ್ ಪ್ರಶಸ್ತಿ'ಯ  20ನೇ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭ ಮಂಗಳವಾರ ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ವರ್ಣರಂಜಿತವಾಗಿ ನಡೆಯಿತು.  ಭಾರತದ ಕ್ರಿಕೆಟ್ ದೇವರು 'ಲಾರಿಯಸ್ ಇಪ್ಪತ್ತು ವರ್ಷದ ಶ್ರೇಷ್ಠ ಕ್ರೀಡಾ ಕ್ಷಣ' ದ ಪ್ರಶಸ್ತಿಯನ್ನು ಪಡೆದರೆ, 'ವರ್ಷದ ಶ್ರೇಷ್ಠ ಪುರುಷ ಕ್ರೀಡಾಪಟು'  ಪ್ರಶಸ್ತಿಯನ್ನು ಬ್ರೀಟನ್ನಿನ ವಿಶ್ವ ಶ್ರೇಷ್ಠ  ಫಾರ್ಮಲ್ ಒನ್ ರೇಸರ್ ಲೂಯಿಸ್ ಹ್ಯಾಮಿಲ್ಟನ್ ಮತ್ತು ಅರ್ಜೆಂಟೈನಾದ ಸ್ಟಾರ್ ಸ್ಟ್ರೈಕರ್ ಲಿಯೋನೆಲ್ ಮೆಸ್ಸಿ ಜಂಟಿಯಾಗಿ ಪಡೆದರು.   ಕ್ರಿಕೆಟ್ ದೇವರಿಗೆ ಲಾರಿಯಸ್ ಪ್ರಶಸ್ತಿ  ಸತತ 22 ವರುಷಗಳ ಕಾಯುವಿಕೆಯ ನಂತರ ತವರು ಮೈದಾನ ವಾಂಖೇಡೆಯಲ್ಲಿ ವಿಶ್ವಕಪ್‌ಗೆ ಸಚಿನ್ ಮುತ್ತಿಕ್ಕಿದಾಗ, ಸಹ ಆಟಗಾರರು ಅವರನ್ನು ಭುಜದ ಮೇಲೆ ಕೂರಿಸಿ ತ್ರಿವರ್ಣ ಧ್ವಜ ಹಾರಿಸುತ್ತಾ ಹೊತ್ತು ತಿರುಗಿದ ಭಾವನಾತ್ಮಕ ಕ್ಷಣಕ್ಕೆ ಲಾರಿಯಸ್ 2000-2020  ಇಪ್ಪತ್ತು ವರ್ಷದ ಶ್ರೇಷ್ಠ ಕ್ರೀಡಾ ಕ್ಷಣ ಪ್ರಶಸ್ತಿ ಲಭಿಸಿತು. 24 ವರ್ಷಗಳ ತನ್ನ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್  ಜೀವನದಲ್ಲಿ ಆರು ವಿಶ್ವಕಪ್ ಆಡಿರುವ ಸಚಿನ್ ಕೊನೆಯ ಭಾರಿ ಪ್ರಶಸ್ತಿ ಎತ್ತಲು ಯಶಸ್ವಿಯಾಗಿದ್ದರು. ಲಾರಿಯಸ್ ಪ್ರಶಸ್ತಿ ಪಡೆದ ಮೊದಲ ಭಾರತಿಯ, ಮೊದಲ ಕ್ರಿಕೆಟಿಗ ಎನ್ನುವ ಮತ್ತೊಂದು ರೆಕಾರ್ಡ್ ದಾಖಲೆಗಳ ಸರದಾರ  ಸಚಿನ್ ತೆಂಡೂಲ್ಕರ್ ಗರಿ ಸೇರಿತು. ಜರ್ಮನ್ ಟೆನಿಸ್ ದಂತಕಥೆ ಬೋರಿಸ್ ಬೇಕರ್ ಸಚಿನ್ ಹೆಸರನ್ನು ಪ್ರಕಟಿಸದರೆ, ಆಸ್ಟ್ರೇಲಿಯಾ ಲೆಜೆಂಡರಿ ಕಪ್ತಾನ ಸ್ಟೀವ್ ವಾ ಸಚಿನ್‌ಗೆ ಪ್ರಶಸ್ತಿ ನೀಡಿದರು. ಫುಟ್ಬಾಲ್‌, ರಗ್ಬಿ, ಟೆನಿಸ್, ಬಾಸ್ಕೆಟ್ ಬಾಲ್ ಅಂತ ವಿಶ್ವವ್ಯಾಪಿ ಆಟದ ನಡುವೆ ಕ್ರಿಕೆಟ್ ಗೆ ಪ್ರಶಸ್ತಿ ಬಂದಿರುವುದು ಅಚ್ಚರಿ ಹಾಗೆ ಸಂತೋಷ ಕೂಡ..  ಇತಿಹಾಸ ನಿರ್ಮಿಸಿದ ಮೆಸ್ಸಿ ವಿಶ್ವದಾಖಲೆಯ 6 ಬಾರಿ ಬ್ಯಾಲಾನ್ ಡಿ’ಓರ್ ಪ್ರಶಸ್ತಿ ವಿಜೇತ, ಬಾರ್ಸಿಲೋನಾ ತಂಡದ ಸ್ಟಾರ್ ಆಟಗಾರ ಲೀಯೊನೆಲ್ ಮೆಸ್ಸಿ  'ಲಾರಿಯಸ್ ವರ್ಷದ ಶ್ರೇಷ್ಠ ಪುರುಷ ಕ್ರೀಡಾಪಟು'  ಪ್ರಶಸ್ತಿಯನ್ನು ಫಾರ್ಮುಲ್ ಒನ್ ಚಾಂಪಿಯನ್ ಲೂಯಿಸ್  ಹ್ಯಾಮಿಲ್ಟನ್ ಜೊತೆ ಜಂಟಿಯಾಗಿ ಪಡೆದರು. ಈ ಮೂಲಕ ಲಾರಿಯಸ್ ವರ್ಷದ ಆಟಗಾರ ಪ್ರಶಸ್ತಿ ಪಡೆದ ಮೊದಲ ಫುಟ್ಬಾಲ್ ಆಟಗಾರ ಎಂಬ ಇತಿಹಾಸ ನಿರ್ಮಿಸಿದರು. ಟೀಮ್ ಗೇಮ್ನ ಆಟಗಾರನೊಬ್ಬ ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯುತ್ತಿರುವುದು ಕೂಡ ಇದೇ ಮೊದಲು. ಇವರ ಜೊತೆ ಜಂಟಿಯಾಗಿ ಪ್ರಶಸ್ತಿ ಪಡೆದ ಬ್ರಿಟಿಷ್ ಫಾರ್ಮುಲ್ ಒನ್ ರೇಸರ್ ಲೂಯೀಸ್  ಹ್ಯಾಮಿಲ್ಟನ್ ಈಗಾಗಲೇ 6 ಬಾರಿ ವಿಶ್ವಚಾಂಪಿಯನ್ಷಿಪ್ ಗೆದ್ದು ಮೈಕಲ್ ಶುಮಾಕರ್ ಅವರ 7  ವಿಶ್ವಾದಾಖಲೆಯನ್ನು  ಸಮಬಲ ಮಾಡುವತ್ತ ಈ ವರ್ಷ ಕಣ್ಣಿಟ್ಟಿದ್ದಾರೆ. ಲಾರಿಯಸ್ ಪ್ರಶಸ್ತಿಯ ಇತಿಹಾಸ 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಕೊಡಮಾಡಲಾಯಿತು. ವರ್ಷದ ಶ್ರೇಷ್ಠ ಪುರುಷ ಕ್ರೀಡಾಪಟು, ಶ್ರೇಷ್ಠ ಮಹಿಳಾ ಕ್ರೀಡಾಪಟು, ಟಿಮ್ ಆಫ್ ದಿ ಇಯರ್, ಕಮ್ ಬ್ಯಾಕ್ ಆಫ್ ದಿ ಇಯರ್ ಹೀಗೆ ಇನ್ನೊಂದಿಷ್ಟು ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ.  ಅತಿ ಹೆಚ್ಚು ಬಾರಿ ಈ ಪ್ರಶಸ್ತಿ ಗೆದ್ದ ವಿಶ್ವದಾಖಲೆ ಟೆನಿಸ್ ಲೆಜೆಂಡ್ ರೊಜರ್ ಫೆಡರರ್ ಹೆಸರಲ್ಲಿದೆ. ಅವರು 5 ಬಾರಿ ಮೆನ್ಸ್ ಪ್ಲೆಯರ್ ಆಫ್ ದಿ ಇಯರ್, ಮತ್ತೊಂದು ಬಾರಿ ಕಮ್ ಬ್ಯಾಕ್ ಆಫ್ ದಿ  ಇಯರ್  ಗೆದ್ದಿದ್ದರು. ಮತ್ತುಳಿದಂತೆ ಚಿರತೆ ವೇಗದ ಓಟಗಾರ ಉಸೇನ್ ಬೋಲ್ಟ್ ಮತ್ತು ಟೆನಿಸ್‌ನ ಇನ್ನೊಬ್ಬ  ಲೆಜೆಂಡರಿ ನೊವಾಕ್  ಜೋಕೊವಿಕ್ ನಾಲ್ಕು ಬಾರಿ ಲಾರಿಯಸ್ ಪ್ರಶಸ್ತಿಯನ್ನು ಮುಡಿಗರೆರಿಸಿಕೊಂಡಿದ್ದಾರೆ. ಗಾಲ್ಫ್ ದಿಗ್ಗಜ ಟೈಗರ್ ವುಡ್ಸ್ ಕೂಡ ನಾಲ್ಕು ಬಾರಿ ಗೆದ್ದಿದ್ದಾರೆ. ಸಚಿನ್ ತೆಂಡೂಲ್ಕರ್  ಗೆದ್ದಿದ್ದು ಬಿಟ್ಟರೆ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ 2002ರಲ್ಲಿ ಒಮ್ಮೆ ಟಿಮ್ ಆಫ್ ದಿ ಇಯರ್ ಆಗಿದ್ದೆ ಕ್ರಿಕೆಟ್‌ನ ಸಾಧನೆ...

HOT NEWS